ಬೆಂವಿವಿ: ವಿದ್ಯಾರ್ಥಿ ವೇದಿಕೆಯಿಂದ ಆಗಸ್ಟ್ 7 ರಂದು ‘ಫೈಟ್ ಫಾರ್ ಟ್ರೋಫಿ’ ಆಯೋಜನೆ – ಶ್ರೀಧರ್ ಎಸ್

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆಯಿಂದ ‘ಫೈಟ್ ಫಾರ್‌ ಟ್ರೋಪಿ’ ಹೆಸರಿನಿಂದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ (ಪುರುಷರು) ಆಯೋಜಿಸಲಾಗುತ್ತದೆಂದು ಹಿರಿಯ ವಿದ್ಯಾರ್ಥಿ ಮುಖಂಡರು ಹಾಗೂ ಹೋರಾಟಗಾರರಾದ ಶ್ರೀಧರ್ ಎಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಈ ಪಂದ್ಯಾವಳಿಯನ್ನು ದಿನಾಂಕ: ಇದೇ ಆಗಸ್ಟ್ 07 ರಿಂದ 10ರವರೆಗೂ ಬೆಂಗಳೂರು ವಿಶ್ವವಿದ್ಯಾಲಯದ ಯುಸಿಪಿಇ ಮೈದಾನ, ಜ್ಞಾನಭಾರತಿ ಆವರಣದಲ್ಲಿ ಬೆಂಗಳೂರು ವಿವಿಯ ಡಿಗ್ರಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜು ಹಾಗೂ ಇತರೆ ವಿವಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದ್ದು, ಹಾಗೆಯೇ ಪ್ರಥಮ ಬಹುಮಾನ 20.000 ರೂ ಮತ್ತು ಟ್ರೋಫಿ, ಎರಡನೇ ಬಹುಮಾನ 10.000 ರೂ, ಟ್ರೋಫಿ, ಮೂರನೇ ಬಹುಮಾನ 5.000 ರೂ, ಟ್ರೋಫಿ ಕೊಡಲಾಗುತ್ತದೆ.

 

ಇನ್ನು ಇದೇ ವೇಳೆಯಲ್ಲಿ ಸದರಿನಿಯಮಗಳನ್ನು ಪ್ರವೇಶ ಶುಲ್ಕ ಇದೇ ಆಗಸ್ಟ್ 5ರಂದು ಪಾವತಿಸಬೇಕಿದೆ, ಅಂಪೈರ್ ಗಳ ನಿರ್ಧಾರವೇ ಅಂತಿಮ, 6 ಓವರ್ ಬೌಲಿಂಗ್ ಹಾಗೂ 2 ಓವರ್ ಮಾತ್ರ ಪವರ್ ಪ್ಲೇ ಆಗಿರುತ್ತದೆ. ಇದರಲ್ಲಿ ಅಂತಿಮ ಪಂದ್ಯವು 8 ಓವರ್‌ ಗಳನ್ನು ಒಳಗೊಂಡಿದೆಂದು ಎಂದು ಪ್ರಾಯೋಜಕರು ಹಾಗೂ ವಿದ್ಯಾರ್ಥಿ ಮುಖಂಡರು ಲೋಕೇಶ್ ಎನ್, ಶಶಿಕುಮಾರ್ ಪಿ ಅವರು ಹೇಳಿದ್ದಾರೆ.

 

ಕ್ರೀಡಾ ಅಭಿಮಾನಿಗಳು ‘ಫೈಟ್ ಫಾರ್ ಟ್ರೋಫಿ’ಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಾಯೋಜಕರು ಹಾಗೂ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆಯ ಮುಖಂಡರಾದ ಶುಭಕರ್, ವಿಜಯ್, ಕೃಷ್ಣ, ಪ್ರಮೋದ್, ಮನು, ಉದಯ, ರಾಜೇಶ್, ಲಿಂಗರಾಜ್, ನಂದೀಶ್, ಈಶ್ವರ್ ಸಿರಿಗೇರಿ, ಮತ್ತಿತರರು ಹೇಳಿದ್ದಾರೆ.

 

Leave A Reply

Your email address will not be published.