ಶ್ರೀ ಮಹಾಲಕ್ಷ್ಮಿ ಪಟ್ಟಣ ಸಹಕಾರ ಬ್ಯಾಂಕ್ (ನಿ) ಚುನಾವಣಾ ಫಲಿತಾಂಶ

ಅದ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ.

ಬೈಲಹೊಂಗಲ : ಪಟ್ಟಣದ ಶ್ರೀ ಮಹಾಲಕ್ಷ್ಮಿ ಪಟ್ಟಣ ಸಹಕಾರ ಬ್ಯಾಂಕ್ ನಿ.ಬೈಲಹೊಂಗಲ ಆಡಳಿತ ಮಂಡಳಿಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಸರ್ವಾನುಮತದಿಂದ ಅವಿರೋಧವಾಗಿ ಅದ್ಯಕ್ಷರಾಗಿ ಬಸವರಾಜ ಬಾಳೆಕುಂದರಗಿ, ಉಪಾಧ್ಯಕ್ಷರಾಗಿ ಆರ್.ಎಸ್ ಕಾದ್ರೋಳ್ಳಿ ಆಯ್ಕೆಯಾಗಿದ್ದಾರೆ.

 

ಈ ಸಂಧರ್ಭದಲ್ಲಿ ಮಾತನಾಡಿದ ಅದ್ಯಕ್ಷರಾದ ಬಸವರಾಜ ಬಾಳೆಕುಂದರಗಿ ನಮ್ಮ ತಂದೆಯವರು ಸ್ಥಾಪನೆ ಮಾಡಿದ ಈ ಸಹಕಾರ ಬ್ಯಾಂಕ್ ಇಲ್ಲಿಯವರೆಗೆ ಎಲ್ಲಾ ನಿರ್ದೇಶಕರು ಅಡಳಿತ ಮಂಡಳಿಯ ಸದಸ್ಯರು ಉತ್ತಮ ರೀತಿಯ ಆಡಳಿತ ನಡೆಸಿಕೊಂಡು ಬಂದಿದ್ದು ಸಂತಸದ ವಿಷಯ ನಿಗಮದ ಠೇವಣಿ ಆರ್ಥಿಕ ಬೆಳವಣಿಗೆ ಲಾಭದಾಯಕ ವಾಗಿದ್ದು ಜನರಿಗೆ ಒಳ್ಳೆಯ ಬಡ್ಡಿ ದರ ಹಾಗೂ ಅತ್ಯಂತ ಸರಳ ರೀತಿಯಲ್ಲಿ ಸಾಲ ನೀಡುತ್ತಿದ್ದು ಸುತ್ತಮುತ್ತಲಿನ ಹಳ್ಳಿಯ ಜನ ಇಲ್ಲಿ ಠೇವಣಿ ಹಾಗೂ ಸಾಲ ಪಡೆಯುವುದರ ಮೂಲಕ ಇದರ ಪ್ರಯೋಜನ ಪಡೆದು ಇನ್ನಷ್ಟು ಬೆಳವಣಿಗೆಗೆ ಸಹಕಾರ ನೀಡಬೇಕು.

 

ಈ ವೇಳೆ ಒಮ್ಮತದಿಂದ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಎಲ್ಲಾ ಆಡಳಿತ ಮಂಡಳಿಯ ನಿರ್ದೇಶಕರಿಗೆ, ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಉಮೇಶ ತುರಮರಿ, ವೀರನಗೌಡ ಪಾಟೀಲ, ಸುಬುದ್ದಿ ರುದ್ರಾಪೂರ, ರಾಚಪ್ಪ ಕರೀಕಟ್ಟಿ, ಅಶೋಕ ವಾಲಿ, ವಿರೂಪಾಕ್ಷ ವಾಲಿ,ಗುರುಪುತ್ರ ಹೊಸಮನಿ, ವಿಮಲಾ ತಟವಾಟಿ, ಅನ್ನಪೂರ್ಣ ಬಾಳೆಕುಂದರಗಿ, ಅನ್ವರಹುಸೇನ ಪಾಟೀಲ, ಶ್ರೀಶೈಲ ಗೊರವರ, ಬಸವನೆವ್ವ ಭರಮಣ್ಣವರ, ಬಿಷ್ಟಪ್ಪ ನಾಯ್ಕರ, ಉಪಸ್ಥಿತರಿದ್ದರು.

Leave A Reply

Your email address will not be published.