ಸರ್ಕಾರಿ ಶಾಲೆಗಳನ್ನು ಚುನಾಯಿತ ಪ್ರತಿನಿಧಿಗಳು ದತ್ತು ತೆಗೆದುಕೊಳ್ಳಬೇಕು : ಸಚಿವ ರಾಮಾಲಿಂಗರೆಡ್ಡಿ

ಮೂಡಲಗಿ : ‘ಸರ್ಕಾರಿ ಶಾಲೆಗಳು ಸುಧಾರಣೆಯಾಗಲು ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಶಿಕ್ಷಣ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕಾರ್ಯ ಮಾಡುವುದು ಅವಶ್ಯವಿದೆ’ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರಡ್ಡಿ ಹೇಳಿದರು.

ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಗೆ ಭೇಟ್ಟಿ ನೀಡಿ ಸಂಸ್ಥೆಯವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸಮಾಜದ ಬದಲಾವಣೆಯು ಶಿಕ್ಷಣದಿಂದ ಮಾತ್ರ ಸಾಧ್ಯ. ಶಾಲೆಗಳನ್ನು ಸುಧಾರಿಸುವ ಮೂಲಕ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುಂತಾಗಬೇಕು ಎಂದರು.

ಬೆಂಗಳೂರಿನಲ್ಲಿ ನನ್ನ ಕ್ಷೇತ್ರದ 22 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿರುವೆ. ಕೋಠಡಿ, ಪೀಠೋಪಕರಣ, ಕಂಪ್ಯೂಟರ್, ಸ್ಮಾರ್ಟ ಕ್ಲಾಸ್‍ರೂಮ್ ಹೀಗೆ ಎಲ್ಲವನ್ನೂ ಸಿದ್ದಗೊಳಿಸಲಾಗಿದೆ. ಇದರಿಂದ ಪ್ರತಿ ವರ್ಷವೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ವೃದ್ಧಿಯಾಗುತ್ತಲಿದೆ ಎಂದರು.

ಮೂಡಲಗಿ ತಾಲ್ಲೂಕು ಕೇಂದ್ರವಾಗಿದ್ದರಿಂದ ಇಲ್ಲಿ ಹೈಟೆಕ್ ಬಸ್ ನಿಲ್ದಾಣ ಮತ್ತು ಡಿಪೋ ಅವಶ್ಯವಿರುವ ಬಗ್ಗೆ ಮನವಿಯನ್ನು ಸ್ಥಳೀಯ ಮುಖಂಡರಿಂದ ಪಡೆದುಕೊಂಡಿದ್ದು, ಅದನ್ನು ಪರಿಶೀಲಿಸುತ್ತೇನೆ. ಡಿಸೆಂಬರ್ ತಿಂಗಳದಲ್ಲಿ ಕೆಲವು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಪರಿಗಣಿಸುತ್ತೇನೆ ಎಂದ ಭರವಸೆ ನೀಡಿದರು.

ಮೂಡಲಗಿಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ, ನಿರ್ದೇಶಕರಾದ ಎ.ಟಿ. ಗಿರಡ್ಡಿ, ಬಿ.ಎಚ್. ಸೋನವಾಲಕರ, ಪ್ರದೀಪ ಲಂಕೆಪ್ಪನ್ನವರ, ವಿ.ಟಿ. ಸೋನವಲಕರ, ಎ.ಐ. ಸತರಡ್ಡಿ, ರವಿ ನಂದಗಾಂವ, ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ, ಎಸ್.ಆರ್. ಸೋನವಾಲಕರ, ಡಾ. ಗಿರೀಶ ಸೋನವಾಲಕರ, ಕೃಷ್ಣಾ ರಡ್ಡಿ, ನಾರಾಯಣ ಹಾದಿಮನಿ, ಪ್ರಾಚಾರ್ಯರಾದ ಪ್ರೊ. ಸಂಗಮೇಶ ಗುಜಗೊಂಡ, ಪ್ರೊ. ಎಂ.ಎಸ್. ಪಾಟೀಲ, ಉಪಪ್ರಾಚಾರ್ಯ ಕೆ.ಎಸ್. ಹೊಸಟ್ಟಿ ಇದ್ದರು.

Leave A Reply

Your email address will not be published.