ಯರಗಟ್ಟಿ : ಕನ್ನಡ ಶಾಲೆಗಳಲ್ಲಿ ‘ಕಣ್ಣು ಬೇನೆ (ಕಂಜಕ್ಟಿವೈಟಿಸ್) ಸಾಂಕ್ರಾಮಿಕ ರೋಗದ ಬಗ್ಗೆ ಮುಂಜಾಗ್ರತೆ ವಹಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

ಯರಗಟ್ಟಿ : ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಿಶ್ವಕರ್ಮ ಹಿರಿಯ ಪ್ರಾಥಮಿಕ ಶಾಲೆ, ಬಸವೇಶ್ವರ ಪ್ರೌಢ ಶಾಲೆ ಹಾಗೂ ಕರ್ನಾಟಕ ಹಿರಿಯ ಕನ್ನಡ ಶಾಲೆ ಗಳಲ್ಲಿ ‘ಕಣ್ಣು ಬೇನೆ (ಕಂಜಕ್ಟಿವೈಟಿಸ್) ಸಾಂಕ್ರಾಮಿಕ ರೋಗದ ಬಗ್ಗೆ ಮುಂಜಾಗ್ರತೆ ವಹಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

 

ಜನದಟ್ಟಣಿ ಇರುವ ಪ್ರದೇಶಗಳಾದ ಶಾಲೆ, ಕಾಲೇಜು, ಹಾಸ್ಟೆಲ್‍ಗಳಲ್ಲಿ ಅತಿ ವೇಗವಾಗಿ ಕಣ್ಣುಬೇನೆ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದೆ. ಈ ಬೇನೆಗೆ ತುತ್ತಾದ ಶಾಲಾ ಮಕ್ಕಳನ್ನು ಬೇರ್ಪಡಿಸಿ ಮಕ್ಕಳಿಗೆ ಹರಡುವುದನ್ನು ತಡೆಗಟ್ಟಲಾಗುತ್ತಿದೆ. ರೋಗಪೀಡಿತ ವಿದ್ಯಾರ್ಥಿಗಳನ್ನು ಬೇರ್ಪಡಿಸಿ ಗುಣಮುಖರಾಗಲು ಸೂಚಿಸಲಾಗುತ್ತಿದೆ.

 

ಸರಕಾರಿ ಆಸ್ಪತ್ರೆಗಳಲ್ಲಿ ಕಣ್ಣಿನ ಹೊರರೋಗಿ ವಿಭಾಗಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸರದಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣ್ಣು ಕೆಂಪಾಗಿ ದೃಷ್ಟಿಯ ಸಮಸ್ಯೆ. ಬೆಳಕಿನ ಅಭಾವ.ರೆಪ್ಪೆಊತ. ಸದಾ ನೀರು ಸುರಿಯುವುದರಿಂದ ಕಣ್ಣಿನ ಉರಿ ಮತ್ತು ನೋವು ತಾಳದೆ ಅಳುತ್ತಿರುವ ಮಕ್ಕಳನ್ನು ಸಂತೈಸಲು ತಾಯಂದಿರು ಹೆಣಗಾಡುತ್ತಿದ್ದಾರೆ.

 

‘ಕಣ್ಣುಬೇನೆ ಇದು ಬ್ಯಾಕ್ಟೀರಿಯಾ ಮತ್ತು ವೈರಸ್‍ನಿಂದ ಹರಡುವ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ನೇರ ಸಂಪರ್ಕ .ರೋಗಿಯು ಸ್ಪರ್ಶಿಸಿ ದ ವಸ್ತುಗಳಿಂದ.ಸೊಂಕಿತರ ಉಸಿರಾಟದ ತುಂತುರ ಹನಿಗಳ ಮೂಲಕ ಹರಡುತ್ತದೆ.

ಮಳೆಗಾಲ ಮತ್ತು ಚಳಿಗಾಲದಲ್ಲಿ ಈ ರೋಗ ಉಲ್ಬಣಿಸುತ್ತದೆ. ಕಣ್ಣಿನ ಉರಿ ಊತ ಬಂದ ರೋಗಿಗಳಿಂದ ಇತರರು ದೈಹಿಕ ಅಂತರ ಕಾಯ್ದುಕೊಳ್ಳಬೇಕು. ರೋಗಿಯ ಕೈವಸ್ತ್ರ, ಟವಲ್,ಚಸ್ಮಾ. ತಲೆದಿಂಬನ್ನು ಇತರರು ಬಳಸಬಾರದು. ಕಣ್ಣುಬೇನೆ ಪೀಡಿತರು ಸಾಬೂನಿನಿಂದ ಆಗಾಗ ಕೈ ತೊಳೆಯಬೇಕು. ಸಕಾಲದಲ್ಲಿ ಚಿಕಿತ್ಸೆ ಪಡೆದು 5 ರಿಂದ 7 ದಿನಗಳಲ್ಲಿ ಗುಣಮುಖರಾಗಬಹುದು’ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್ ಆರ್ ಗಂಜಿ ಹೇಳಿದರು.

 

ಸದರಿ ಕಾರ್ಯಕ್ರಮಗಳಲ್ಲಿ ಆರೋಗ್ಯ ಇಲಾಖೆಯ ಮಂಜುಳಾ ಈರಗಾರ, ಅಂಜನಾ ನಾಮದಾರ. ಯರಗಟ್ಟಿ ವಲಯದ ಬಿ ಆರ್ ಪಿ. ಸಿ ಆರ್ ಪಿ. ಶಾಲಾ ಶಿಕ್ಷಕರು.ಆಶಾಕಾರ್ಯಕರ್ತೆಯರು.ವಿದ್ಯಾರ್ಥಿಗಳು ಹಾಜರಿದ್ದರು.

Leave A Reply

Your email address will not be published.