ತೂಕ ಇಳಿಸಲು ಸಮತೋಲಿತ ಆಹಾರ (DIET))

ಸೆಪ್ಟೆಂಬರ್ 1-7 ರವರೆಗೆ ರಾಷ್ಟ್ರೀಯ ಸಮತೋಲನ ಆಹಾರ ಸಪ್ತಾಹ ನಿಮಿತ್ತ ಈ ಲೇಖನ

ಡಯಟ್ ಅಂದರೆ ಸಮತೋಲಿತ ಉತ್ತಮ ಆಹಾರವನ್ನು ಸರಿಯಾದ ಸಮಯದಲ್ಲಿ ತಿನ್ನುವುದು. ನಮ್ಮ ದೇಹಕ್ಕೆ ಬೇಕಾಗಿರುವ ಪ್ರಮಾಣಕ್ಕಿಂತ ಯಥೇಚ್ಛವಾಗಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ದೇಹದ ತೂಕದಲ್ಲಿ ಕೊಂಚ ಜಾಸ್ತಿ ಆದರೂ ಖಿನ್ನತೆಗೆ ಒಳಗಾಗುತ್ತೇವೆ. ಅಧಿಕ ಬೊಜ್ಜಿನ ಸಮಸ್ಯೆಯಿಂದ ಅದೆಷ್ಟೋ  ಯುವ ಜನರು ತಮ್ಮ ಬಗ್ಗೆ ತಾವೇ ಕೇಳರಿಮೆ ಹುಟ್ಟಿಸಿಕೊಂಡು ಒತ್ತಡಕ್ಕೆ ಸಿಲುಕಿರುತ್ತಾರೆ. ಆರೋಗ್ಯಕರ ಆಹಾರ ಸೇವನೆಯಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದು ಹಾಗಾಗಿ ತಿನ್ನುವ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಅಗತ್ಯ.

 

 

ಪ್ರತಿದಿನ 20 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ಆರಂಭಿಸಿ, ನಂತರ ಜಾಗಿಂಗ್ ಮಾಡುವುದನ್ನು ಸೈಕ್ಲಿಂಗ್ ಮಾಡುವುದನ್ನು ಅಭ್ಯಾಸ ಮಾಡಿ ಇದರ ಜೊತೆಗೆ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಿಕೊಳ್ಳಿ ಊಟ ತಿಂಡಿಯನ್ನು ಸರಿಯಾದ ಸಮಯಕ್ಕೆ ಸೇವಿಸಿ. ಮನಸ್ಸಿಗೆ ಬಂದ ಸಮಯದಲ್ಲಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು ನಿಮ್ಮ ಊಟದೊಂದಿಗೆ ಪ್ರೋ ಟೀನ್ ಹಾಗೂ ನಾರಿನ ಅಂಶ ಅಧಿಕವಾಗಿರುವಂತೆ ನೋಡಿಕೊಳ್ಳಿ.

 

 

ಬೆಳಗ್ಗಿನ ಉಪಹಾರ ಬಹಳ ಮುಖ್ಯ ಇದು ದೇಹದಲ್ಲಿ ಚಯಾಪಚಯ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗಾಗಿ ಬೆಳಗಿನ ಉಪಹಾರ ಆರೋಗ್ಯಕರವಾಗಿರಬೇಕು ಹಣ್ಣುಗಳು ಹಾಗೂ ತರಕಾರಿಯಿಂದ ತಯಾರಿಸಿದ ಸಲಾಡನ್ನು ಬೆಳಿಗ್ಗೆ ಸೇವಿಸುವುದು ಉತ್ತಮ.

 

 

ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ತಿಂದರೆ ಅದರಿಂದ ತೂಕಇಳಿಸಲು ತುಂಬಾ ನೆರವಾಗಲಿದೆ. ಯಾಕೆಂದರೆ ಈ ಹಣ್ಣಿನಲ್ಲಿರುವ ಪಪೈನ್ ಎನ್ನುವ ಅಂಶ ದೇಹದ ಕೊಬ್ಬನ್ನು ಕರಗಿಸಿ ಫ್ರೀ ರಾಡಿಕಲ್ ಗಳನ್ನು ದೂರ ಮಾಡುವುದು.ಇದು ಕಡಿಮೆ ಕ್ಯಾಲರಿಯನ್ನು ಹೊಂದಿದೆ.

 

 

ಲಿಂಬೆ ಹಣ್ಣಿನ ರಸವನ್ನು ಒಂದು ಲೋಟ ಬಿಸಿ ನೀರಿಗೆ ಹಿಂಡಿಕೊಂಡು ಸಕ್ಕರೆ ಮತ್ತು ಉಪ್ಪು ಹಾಕದೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ದೇಹದ ತೂಕ ಇಳಿಯುವುದು ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುವುದು. ಹಸಿವಿದ್ದಾಗ ಮಾತ್ರ ತಿನ್ನಿ ಪದೇಪದೇ ತಿನ್ನುವ ಅಭ್ಯಾಸವನ್ನು ಬಿಟ್ಟರೆ ತೂಕ ಇಳಿಸಬಹುದು.

 

 

ಉತ್ತಮ ಸಮತೋಲಿತ ಆಹಾರ ಉತ್ತಮ ವ್ಯಾಯಾಮ ಹಾಗೂ ದಿನನಿತ್ಯ ಯೋಗಾಭ್ಯಾಸ ದೇಹದ ತೂಕವನ್ನು ಸಮತೋಲನದಲ್ಲಿಡಬಹುದು. ಅಧಿಕ ತೂಕದಿಂದ ಅನೇಕ ಕಾಯಿಲೆಗಳು ಬರುವ ಸಾಧ್ಯತೆ ಇದೆ ಅವುಗಳಲ್ಲಿ ಪ್ರಮುಖವಾಗಿರುವುದು ಮಧುಮೇಹ PಅಔS ರಕ್ತದೊತ್ತಡ ಥೈರಾಯಿಡ್ ಸಮಸ್ಯೆ ಸಂಧಿವಾತ ಹೃದಯ ಸಂಬಂಧಿ ಕಾಯಿಲೆಗಳು ಇತ್ಯಾದಿ.

 

ganesh gadag

ಡಾ.ಗಣೇಶ ಸುಲ್ತಾನಪುರ
ವೈದ್ಯರು ಬರಹಗಾರರು ಗದಗ

Leave A Reply

Your email address will not be published.