148 ಪಲ್ಲಕ್ಕಿ ಬಸ್​ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 148 ಪಲ್ಲಕ್ಕಿ ಬಸ್‌ ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಇಂದು ಚಾಲನೆ ನೀಡಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಒಟ್ಟು 148 ಬಸ್​ಗಳಿಗೆ ಚಾಲನೆ ನೀಡಲಾಗಿದ್ದು, 44 ಎಸಿ ಸ್ಲೀಪರ್ ಮತ್ತು ನಾಲ್ಕು ನಾನ್ ಎಸಿ ಸ್ಪೀಪರ್ ಬಸ್​ಗಳು ಒಳಗೊಂಡಿವೆ.

 

 

ಆದರೆ, ಸ್ಲೀಪರ್ ಬಸ್​ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಹೊಸ ಬಸ್‌ಗಳ ವೀಕ್ಷಣೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರು ನಡೆಸಿದ್ದು, ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುನಿಯಪ್ಪ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಸಾರಿಗೆ ಅಧಿಕಾರಿಗಳು ಭಾಗಿಯಾಗಿದ್ದರು.

 

 

ಕೆಎಸ್ಆರ್ ಟಿಸಿ ಯಲ್ಲಿ ಇದೇ ಮೊದಲ ಬಾರಿಗೆ ನಾನ್‌ ಎಸಿ ಬಸ್‌ಗೆ ಬ್ರ್ಯಾಂಡ್‌ ಹೆಸರನ್ನು ಇಟ್ಟು ಸೇವೆ ನೀಡಲಾಗುತ್ತಿದೆ. ಹೊಸದಾಗಿ ಸೇರ್ಪಡೆಯಾಗುತ್ತಿರುವ ನಾನ್‌ ಎಸಿ ಸ್ಲೀಪರ್‌ ಬಸ್‌ಗಳನ್ನು ‘ಪಲ್ಲಕ್ಕಿ ಉತ್ಸವ’ ಹೆಸರಿನಲ್ಲಿ ಸೇವೆಗೆ ನೀಡಲಾಗುತ್ತಿದೆ.

 

 

40 ನಾನ್ ಎಸಿ ಸ್ಲೀಪರ್ ನೂರು ನಗರ ಸಾರಿಗೆ ಬಸ್ಸುಗಳು, ಅಶೋಕ ಲೇಲ್ಯಾಂಡ್ ಕಂಪನಿಗೆ ಸೇರಿವೆ. ನಾಲ್ಕು ನಾನ್ ಎಸಿ ಸ್ಲೀಪರ್, ನಾಲ್ಕು ಎಸಿ ಸ್ಲೀಪರ್ ಟಾಟಾ ಕಂಪನಿಯದಾಗಿದೆ.

Leave A Reply

Your email address will not be published.