ಸಾತೇನಹಳ್ಳಿ ಗ್ರಾಮದಲ್ಲಿ ಪುರಾಣ ಪ್ರವಚನ

ಹಿರೇಕೆರೂರು : ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಸಾತೇನಹಳ್ಳಿ ಗ್ರಾಮದ ನಡೆದಾಡುವ ದೇವರು ಶ್ರೀ ವೃಷಭ ರೂಪಿ ಶಿವಾಲಿ ಬಸವೇಶ್ವರ ಮೂಕಪ್ಪ ಮಹಾ ಸ್ವಾಮಿಗಳ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ತಾಯಿ ಜಗನ್ಮಾತೆ ಆದಿಶಕ್ತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಿ ಮಹಾತ್ಮೆ ಪುರಾಣ ಪ್ರವಚನ ಕಾರ್ಯಕ್ರಮವನ್ನು ಪ್ರತಿದಿನ ರಾತ್ರಿ ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಬಳಗದವರು ನಡೆಸಿಕೊಡುತ್ತಿದ್ದಾರೆ.

 

ನಂತರ ಪ್ರತಿ ದಿನ ಪ್ರತಿಯೊಂದು ಓಣಿಯ ಭಕ್ತರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೇರವೆರಿಸುತ್ತಾರೆ  ಹಾಗೂ ಅದೇ ಓಣಿಯವರಿಂದ ಅನ್ನಪ್ರಸಾದ ನೇರವೆರಿಸಲಾಗುತ್ತದೆ.

Leave A Reply

Your email address will not be published.