ಅಕ್ಟೋಬರ್ 16 ವಿಶ್ವ ಆಹಾರ ದಿನ

ಪ್ರತಿವರ್ಷ ಅಕ್ಟೋಬರ್ 16 ರಂದು ವಿವಿಧ ಥೀಮ್‌ ನಡಿಯಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಅಂತೆಯೇ ಈ ವರ್ಷದ ವಿಶ್ವ ಆಹಾರ ದಿನದ ಥೀಮ್ "ಕೃಷಿ ಸಹಕಾರ-ವಿಶ್ವಕ್ಕೆ ಆಹಾರ ಉಣಿಸುವ ಕೀಲಿ ಕೈ" ಎಂಬುದಾಗಿದೆ.

ಪೌಷ್ಟಿಕ ಆಹಾರದ ಸೇವನೆ ದೇಶದ ಪ್ರತಿಯೊಂದು ಮಗುವಿನ ಹಕ್ಕು. ಆಹಾರ ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲಿ ಪೌಷ್ಟಿಕ ಆಹಾರದ ಕೊರತೆ, ಹಸಿವು ಮತ್ತು ಬಡತನ ಕಿತ್ತು ತಿನ್ನುತ್ತಿವೆ. ಆಹಾರದ ಕೊರತೆಯಿಂದಾಗಿ ಸಾಮಾನ್ಯ ಜನರ ಜೀವನದ ಮೇಲೆ ಹೊಡೆತ ಬಿದ್ದಿದೆ. ಜೀವನ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಾಗಾಗಿ ಬಡತನ ಮತ್ತು ಹಸಿವಿನ ವಿರುದ್ಧ ಹೋರಾಟದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಬಹಳ ಅಗತ್ಯ.

 

ಪ್ರತಿವರ್ಷ ಅಕ್ಟೋಬರ್ 16 ರಂದು ವಿವಿಧ ಥೀಮ್‌ ನಡಿಯಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಅಂತೆಯೇ ಈ ವರ್ಷದ ವಿಶ್ವ ಆಹಾರ ದಿನದ ಥೀಮ್ “ಕೃಷಿ ಸಹಕಾರ-ವಿಶ್ವಕ್ಕೆ ಆಹಾರ ಉಣಿಸುವ ಕೀಲಿ ಕೈ” ಎಂಬುದಾಗಿದೆ.

 

ಇಂದು ವಿಶ್ವ ಆಹಾರ ದಿನ. ಜೊತೆಗೆ ಜಗತ್ತಿನಾದ್ಯಂತ ಆಚರಿಸಲಾಗುವ ಬಹುಮುಖ್ಯ ದಿನ ಇಂದು. ಅಕ್ಟೋಬರ್ 16 ರ ವಿಶ್ವ ಆಹಾರ ದಿನದ ಮಹತ್ವದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಲೇಬೇಕು. 1945 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಅಕ್ಟೋಬರ್​ 16 ನ್ನು ವಿಶ್ವ ಆಹಾರ ದಿನವನ್ನಾಗಿ ಘೋಷಿಸಿತು. ಅಂದಿನಿಂದ ಈವರೆಗೆ ಪ್ರತಿವರ್ಷ ಅಕ್ಟೋಬರ್ 16 ನ್ನು ಅಂತರಾಷ್ಟ್ರೀಯ ಆಹಾರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತೀ ವರ್ಷ ಇದೇ ದಿನದಂದು ಹೊಸ ಸಂಗತಿಯೊಂದಿಗೆ ಆಹಾರ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಕ್ಯಾಲೆಂಡರ್​​​ನಲ್ಲಿ ಅತೀ ಪ್ರಮುಖ ದಿನವೆನಿಸಿರುವುದು ಅಕ್ಟೋಬರ್ 16. ಅಂದರೆ ವಿಶ್ವ ಆಹಾರ ದಿನ. ಸರ್ಕಾರದ ಹೊಸ-ಹೊಸ ಕಾರ್ಯಕ್ರಮಗಳು, ವ್ಯವಹಾರಗಳು, ಎನ್​ ಜಿ ಓ ಗಳು, ಮಾಧ್ಯಮಗಳು, ಸಾರ್ವಜನಿಕರು ಹೀಗೆ ಎಲ್ಲರೂ ಒಟ್ಟುಗೂಡಿ ವಿಶ್ವ ಆಹಾರ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

 

ಯುನೈಟೆಡ್ ನೇಶನ್ಸ್ 1945 ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಿತು. ಸಂಸ್ಥೆಯ ಸ್ಮರಣಾರ್ಥ ಈ ದಿನವನ್ನು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. 1981 ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಆಹಾರ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಆರೋಗ್ಯಕರ ಜೀವನ ನಡೆಸಲು ಪೌಷ್ಟಿಕಾಂಶವುಳ್ಳ ಆಹಾರ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ವಿಶ್ವ ಆಹಾರ ದಿನದ ಮುಖ್ಯ ಉದ್ದೇಶಗಳಲ್ಲಿ ಒಂದು. ಅಪೌಷ್ಟಿಕಾಂಶ ಮತ್ತು ಬಡತನವನ್ನು ಎದುರಿಸಲು ಪ್ರತಿಯೊಂದು ರಾಷ್ಟ್ರ ಮತ್ತು ನಾಗರಿಕ ಸಮಾಜದ ವಿವಿಧ ಸಂಸ್ಥೆಗಳು ಕೆಲಸ ಮಾಡಬೇಕಿವೆ. ಹಸಿವಿನ ವಿರುದ್ಧ ಪೋಷಕರು ಮತ್ತು ಸಮಾಜ ಒಟ್ಟಾಗಿ ಹೋರಾಡಬೇಕಿದೆ. ಶಿಕ್ಷಣ ನೀಡುವುದರ ಮೂಲಕ ಈ ಕುರಿತು ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು. ಹಸಿವು ಮತ್ತು ಬಡತನದ ತೀವ್ರತೆ ಹೆಚ್ಚುತ್ತಲೇ ಇದೆ. ಆದರೆ ನೈಸರ್ಗಿಕ ಸಂಪನ್ಮೂಲಗಳು ಮಿತಿಯಲ್ಲಿವೆ. ಹಾಗಾಗಿ ಆಹಾರ ಬೆಳೆಯ ಉತ್ಪಾದನೆಗೆ ಹೆಚ್ಚು ಬಂಡವಾಳ ತೊಡಗಿಸಬೇಕಾದ ಅಗತ್ಯ ಇದೆ.

 

ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಬೆಲೆ ಅಂತರ, ನಿರ್ದಿಷ್ಟ ಏರಿಕೆ ಆಹಾರ ಭದ್ರತೆಯನ್ನು ಪ್ರತಿನಿಧಿಸುತ್ತದೆ. ವಿಶ್ವ ಬ್ಯಾಂಕ್‌ನ ಪ್ರಕಾರ 2010-2011 ರಲ್ಲಿ ಆಹಾರ ಬೆಲೆ ಏರಿಕೆಯಿಂದಾಗಿ ಸುಮಾರು 70 ದಶಲಕ್ಷ ಜನರು ಬಡತನಕ್ಕೆ ತಳ್ಳಲ್ಪಟ್ಟರು. ಇದರಿಂದಾಗಿ ವಿಶ್ವವ್ಯಾಪಿ ಹಸಿವು ಮತ್ತು ಬಡತನ ತೀವ್ರತೆಯನ್ನು ಪಡೆದುಕೊಂಡಿತು. ಕೃಷಿ ಆಹಾರ ಉತ್ಪಾದನೆಯನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ, ದ್ವಿಪಕ್ಷೀಯ, ಬಹುಪಕ್ಷೀಯ ಮತ್ತು ಸರ್ಕಾರೇತರ ಪ್ರಯತ್ನಗಳನ್ನು ಉತ್ತೇಜಿಸುವ ಸಲುವಾಗಿ ಕೆಲವೊಂದು ಉದ್ದೇಶಗಳನ್ನು ಗುರಿಗಳನ್ನಾಗಿಸಿಕೊಂಡಿದೆ.

 

# ಉದ್ದೇಶಗಳು.
* ಅಭಿವೃದ್ಧಿಶೀಲ ದೇಶಗಳಲ್ಲಿ ಆರ್ಥಿಕ ಮತ್ತು ತಾಂತ್ರಿಕ ಸಹಕಾರವನ್ನು ಪ್ರೋತ್ಸಾಹಿಸುವುದು.
* ನಿರ್ಧಾರಗಳು ಮತ್ತು ಜೀವನ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರುವ ಚಟುವಟಿಕೆಗಳಲ್ಲಿ ಗ್ರಾಮೀಣ ಜನರು ವಿಶೇಷವಾಗಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು
* ಹಸಿವು ಮತ್ತು ಬಡತನದ ಹಿಂದಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು
* ಹಸಿವು, ಅಪೌಷ್ಟಿಕತೆ ಮತ್ತು ಬಡತನ ವಿರುದ್ಧದ ಹೋರಾಟದಲ್ಲಿ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಒಕ್ಕೂಟವನ್ನು ಬಲಗೊಳಿಸಲು ಹಾಗೂ ಆಹಾರ ಮತ್ತು ಕೃಷಿ ಅಭಿವೃದ್ಧಿ ಸಾಧನೆಗಳ ಮೂಲಕ ಗಮನ ಸೆಳೆಯುವುದು.
* ಅಭಿವೃದ್ಧಿಶೀಲ ರಾಷ್ಟ್ರಗಳ ತಂತ್ರಜ್ಞಾನ ವರ್ಗಾವಣೆ ಮತ್ತು ಪ್ರಚಾರ.

 

# ಎಲ್ಲಿಂದ ಆರಂಭ.
ವಿಶ್ವ ಆಹಾರ ಸಂಸ್ಥೆಯು 1979 ರಲ್ಲಿ ನಡೆಸಿದ 20 ನೇ ಸಾಮಾನ್ಯ ಸಮ್ಮೇಳನದಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ರಚಿಸಲಾಯಿತು. ಹಂಗೇರಿ ನಿಯೋಜನೆಯ ಹಂಗೇರಿಯನ್‌ನ ಕೃಷಿ ಮಂತ್ರಿ ಡಾ. ಪಾಲ್ ರೊಮಾನಿ; ವಿಶ್ವ ಆಹಾರ ದಿನವನ್ನು ವಿಶ್ವದಾದ್ಯಂತ ಆಚರಣೆಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸುಮಾರು 150 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಸಿವು ಮತ್ತು ಬಡತನದ ಹಿಂದಿರುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.

 

ಪ್ರತಿ ವರ್ಷ ಅಕ್ಟೋಬರ್ 16 ನ್ನು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಜಾಗೃತಿ ಮೂಡಿಸುವ ಸಲುವಾಗಿ ವಿವಿಧೆಡೆ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ ಒಟ್ಟು 925 ಮಿಲಿಯನ್ ಜನರಿಗೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಶೇ.70 ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಕೃಷಿ ಆಹಾರ ಮತ್ತು ಆದಾಯದ ಮೂಲ ಆಗಿದೆ. ಆಹಾರ ಬಿಕ್ಕಟ್ಟಿನಿಂದಾಗಿ ಈ ವರ್ಷದ ಥೀಮ್‌ನ್ನು ಯುನೈಟೆಡ್ ನೇಷನ್ಸ್ ಕೃಷಿ ಸಹಕಾರ-ವಿಶ್ವಕ್ಕೆ ಆಹಾರ ಉಣಿಸುವ ಕೀಲಿ ಕೈ ಎಂಬುದಾಗಿ ಘೋಷಿಸಿದೆ.

 

ಹೇಮಂತ್ ಚಿನ್ನು

Leave A Reply

Your email address will not be published.