ಪೋಲಿಯೊ ಲಸಿಕೆ ಮಗುವಿನ ಭವಿಷ್ಯದ ಸಂಜೀವಿನಿ”. ~ಪೋಲಿಯೊ ಮುಕ್ತ ದೇಶವಾಗಿಸೋಣ.

ಅಕ್ಟೋಬರ್ 24-"ವಿಶ್ವ ಪೋಲಿಯೊ ದಿನ" ತನ್ನಿಮಿತ್ತ ಸಾಂದರ್ಭಿಕ ಲೇಖನ.

“ಅಂತಿಮವಾಗಿ, ನಾವು ಪರಿಸರ ವ್ಯವಸ್ಥೆಯನ್ನು ನಾಶಪಡಿಸಿದರೆ, ನಾವು ನಮ್ಮನ್ನು ನಾಶಪಡಿಸಿಕೊಳ್ಳುತ್ತೇವೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು” ಎಂದು ಪೋಲಿಯೊ ಲಸಿಕೆಯ ಪಿತಾಮಹ ಜೋನಾಸ್ ಸಾಲ್ಕ್ ಹೇಳಿದ್ದಾರೆ. ಅದರಂತೆ ವಿಶ್ವದಿಂದ ಪೋಲಿಯೋವನ್ನು ಹೋಗಲಾಡಿಸಲು ಶ್ರಮಿಸಿದ ಹಾಗೂ ಪೋಲಿಯೋ ಲಸಿಕೆ ಕಂಡು ಹಿಡಿದ ಜೋನಸ್ ಸಾಲ್ಕ್ ಅವರ ಜನ್ಮದಿನದ ಸವಿನೆನಪಿಗಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಅಕ್ಟೋಬರ್ 24 ರಂದು “ವಿಶ್ವ ಪೋಲಿಯೋ ಲಸಿಕೆ”ದಿನವನ್ನಾಗಿ ಆಚರಿಸಲಾಗುತ್ತಿದೆ.

 

ಈ ದಿನವು ಪೋಲಿಯೊ ಮುಕ್ತ, ಭವಿಷ್ಯದ ಕಡೆಗೆ ಜಾಗತಿಕ ಪ್ರಯತ್ನಗಳನ್ನು ಸ್ಮರಿಸಲಾಗುತ್ತದೆ.ಹಾಗೆಯೇ ಪ್ರಪಂಚದ ಮೂಲೆ ಮೂಲೆಯಿಂದ ಪೋಲಿಯೊವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೋರಾಟದ ಮುಂಚೂಣಿಯಲ್ಲಿ ಕಾರ್ಯ ಮಾಡುವವರ ನಿಸ್ವಾರ್ಥ ತ್ಯಾಗವನ್ನು ಇಂದು ನೆನಪಿಸಿ ಕೊಂಡಾಡಲಾಗುತ್ತದೆ.

 

 

ಪಲ್ಸ್ ಪೋಲಿಯೊ ಎನ್ನುವುದು ಭಾರತದಲ್ಲಿ ಪೋಲಿಯೊಮೈಲಿಟಿಸ್ ಅನ್ನು ತೊಡೆದುಹಾಕಲು ಭಾರತ ಸರ್ಕಾರವು ಸ್ಥಾಪಿಸಿದ ರೋಗನಿರೋಧಕ ಅಭಿಯಾನವಾಗಿದೆ.ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು 1994 ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ.ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯೊಂದಿಗೆ ಭೀಕರ ಪರಿಣಾಮಗಳನ್ನು ಬೀರಬಹುದಾದ ಈ ಮಾರಕ ರೋಗವನ್ನು ತಡೆಗಟ್ಟಲು ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕಾಗಿದೆ ಹಾಗೂ ನಮ್ಮ ಜವಾಬ್ದಾರಿ ಕೂಡ ಹೌದು.

#ಹಿನ್ನಲೆ :
ವಿಶ್ವ ಆರೋಗ್ಯ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ನಂತರ 1988 ರಲ್ಲಿ ಪೋಲಿಯೊ ನಿರ್ಮೂಲನೆಯ ಜಾಗತಿಕ ಉಪಕ್ರಮದೊಂದಿಗೆ ಪಲ್ಸ್ ಪೋಲಿಯೊವನ್ನು ಪ್ರಾರಂಭಿಸಲಾಯಿತು. ಹಾಗೆಯೇ ಭಾರತದಲ್ಲಿ 1994 ರಂದು ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ಮೊದಲು ಪ್ರಾರಂಭಿಸಲಾಯಿತು.ಅಂದಿನಿಂದ ಪ್ರತಿ ವರ್ಷ, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ನೀಡಲು ಪ್ರಾರಂಭಿಸಿದೆ.
#ಪೋಲಿಯೊದ ಲಕ್ಷಣಗಳು ಯಾವುವು..?

 

ಮಕ್ಕಳುಯವೈರಸ್‌ಗೆ ಒಳಗಾಗಿದ್ದರೆ, ನೀವು ಗಮನಿಸಬಹುದಾದ ಮೊದಲ ರೋಗಲಕ್ಷಣಗಳೆಂದರೆ ತೀವ್ರ ಜ್ವರ, ನಿಶ್ಯಕ್ತಿ, ತಲೆನೋವು, ವಾಕರಿಕೆ, ಗಟ್ಟಿಯಾದ ಕುತ್ತಿಗೆ, ಪಾರ್ಶ್ವವಾಯು, ಉಸಿರಾಟದ ತೊಂದರೆ, ನುಂಗಲು ಅಥವಾ ಮಾತನಾಡಲು ಮತ್ತು ಕೈಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

 

#ಪೋಲಿಯೊ ರೋಗ ಹರಡುವಿಕೆ:
ಪೋಲಿಯೊವೈರಸ್ ಸುಲಭವಾಗಿ ಹರಡುವುದರಿಂದ ಪೋಲಿಯೊ ಸಾಂಕ್ರಾಮಿಕವಾಗಿದೆ.ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಮುಖ್ಯವಾಗಿ ಮಲ-ಮೌಖಿಕ ಮಾರ್ಗದ ಮೂಲಕ ಹರಡುತ್ತದೆ ಅಥವಾ ಕಲುಷಿತ ನೀರು ಅಥವಾ ಆಹಾರ ಮೂಲಕ ಹರಡುತ್ತದೆ. ಕರುಳಿನಲ್ಲಿ ಕಾಣಿಸಿಕೊಳ್ಳುವ ಇದು ನರಮಂಡಲಕ್ಕೂ ಹಾನಿ ಮಾಡಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ನೂರು ಮಂದಿ ಪೋಲಿಯೋ ಪೀಡಿತರಲ್ಲಿ ಕೇವಲ ಶೇ. 0.5ರಷ್ಟು ಮಂದಿಗೆ ಪಾರ್ಶ್ವವಾಯು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪಾರ್ಶ್ವವಾಯುವಿಗೆ ಒಳಗಾದವರಲ್ಲಿ, ಉಸಿರಾಟದ ಸ್ನಾಯುಗಳು ನಿಶ್ಚಲವಾದಾಗ ಸಾವು ಸಂಭವಿಸುವ ಸಾಧ್ಯತೆ ಶೇಕಡಾ 5ರಿಂದ 10ರಷ್ಟಿರುತ್ತದೆ.

 

#ಭಾರತದಲ್ಲಿ ಪೋಲಿಯೊ:
ಭಾರತವು ಅಕ್ಟೋಬರ್ 02, 1994ರಂದು ಪಲ್ಸ್ ಪೋಲಿಯೊ ಪ್ರತಿರಕ್ಷಣೆ ಕಾರ್ಯಕ್ರಮವನ್ನು ಜಾರಿಗೊಳಿಸಿತು. ಆಗ ದೇಶವು ಜಾಗತಿಕ ಪೋಲಿಯೊ ಪ್ರಕರಣಗಳಲ್ಲಿ ಸುಮಾರು ಶೇಕಡಾ 60ರಷ್ಟನ್ನು ಹೊಂದಿತ್ತು. ಎರಡು ದಶಕಗಳ ನಂತರ ಅಂದರೆ 27 ಮಾರ್ಚ್ 2014ರಂದು ವಿಶ್ವ ಆರೋಗ್ಯ ಸಂಘಟನೆಯಿಂದ ‘ಪೋಲಿಯೊ ಮುಕ್ತ ಪ್ರಮಾಣೀಕರಣ’ವನ್ನು ಪಡೆಯಿತು. ಕೊನೆಯ ಪೋಲಿಯೊ ಪ್ರಕರಣವು ಜನವರಿ13, 2011 ರಂದು ಪಶ್ಚಿಮ ಬಂಗಾಳದ ಹೌರಾದಲ್ಲಿ ವರದಿಯಾಗಿದೆ.ದೇಶದ ಅತ್ಯಂತ ದೂರದ ಭಾಗಗಳಲ್ಲಿ ವಾಸಿಸುವ ಅತ್ಯಂತ ಅಂಚಿನಲ್ಲಿರುವ ಮತ್ತು ದುರ್ಬಲ ಗುಂಪುಗಳನ್ನು ಒಳಗೊಂಡಂತೆ ಎಲ್ಲರಿಗೂ ಲಸಿಕೆಗಳಿಗೆ ಸಮಾನ ಪ್ರವೇಶವನ್ನು ಖಚಿತಪಡಿಸುವುದು ನಿರ್ಮೂಲನೆಯನ್ನು ಸಾಧ್ಯವಾಗಿಸಿತು. ಪ್ರತಿ ಹಂತದಲ್ಲೂ ಹೆಚ್ಚಿನ ಬದ್ಧತೆಯು ನೀತಿಯು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಪಾಲುದಾರರು ಮತ್ತು ಸಮುದಾಯ ಸ್ವಯಂಸೇವಕರು, ಅವರು ಎಲ್ಲಿದ್ದರೂ, ಮನೆಯಲ್ಲಿ, ಶಾಲೆಯಲ್ಲಿ ಪ್ರತಿ ಮಗುವಿಗೆ ಜೀವ ಉಳಿಸುವ ಪೋಲಿಯೊ ಹನಿಗಳನ್ನು ತಲುಪಿಸಲು ಒಟ್ಟಾಗಿ ಕೆಲಸ ಮಾಡಲು ಕಾರಣವಾಯಿತು.

 

 

#ಚಿಕಿತ್ಸೆ ಅಥವಾ ತಡೆಗಟ್ಟುವಿಕೆ:
ಪೋಲಿಯೊಗೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ಉಪಚಾರಗಳಿವೆ.ಆಧುನಿಕ ಚಿಕಿತ್ಸೆಯ ಗಮನವು ರೋಗಲಕ್ಷಣಗಳ ಪರಿಹಾರವನ್ನು ಒದಗಿಸುವುದು.ತ್ವರಿತ ಚೇತರಿಕೆ ಮತ್ತು ತೊಡಕುಗಳನ್ನು ತಡೆಗಟ್ಟುವುದು.ಸೋಂಕನ್ನು ತಡೆಗಟ್ಟಲು ಪ್ರತಿಜೀವಕಗಳು , ನೋವು ನಿವಾರಕಗಳು , ಮಧ್ಯಮ ವ್ಯಾಯಾಮ ಮತ್ತು ಪೌಷ್ಟಿಕ ಆಹಾರ ಸೇರಿವೆ. ಪೋಲಿಯೊ ಚಿಕಿತ್ಸೆಗೆ ಸಾಮಾನ್ಯವಾಗಿ ಔದ್ಯೋಗಿಕ ಚಿಕಿತ್ಸೆ , ದೈಹಿಕ ಚಿಕಿತ್ಸೆ , ಕಟ್ಟುಪಟ್ಟಿಗಳು, ಸರಿಪಡಿಸುವ ಬೂಟುಗಳು ಮತ್ತು ಕೆಲವು ಸಂದರ್ಭಗಳಲ್ಲಿ, ಮೂಳೆ ಶಸ್ತ್ರಚಿಕಿತ್ಸೆ ಸೇರಿದಂತೆ ದೀರ್ಘಾವಧಿಯ ಪುನರ್ವಸತಿ ಅಗತ್ಯವಿರುತ್ತದೆ.
#ಮೂರು ಪೋಲಿಯೊ ವೈರಸ್‌ಗಳನ್ನು (ಡಬ್ಲ್ಯುಪಿಎ ಗಳು) ಗುರುತಿಸಲಾಗಿದೆ:

 

ಟೈಪ್ 1, ಟೈಪ್ 2, ಮತ್ತು ಟೈಪ್ 3. ಪೋಲಿಯೊ ಲಸಿಕೆಯು ಪೋಲಿಯೊವನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ, ಏಕೆಂದರೆ ಇದು ಎಲ್ಲಾ ಮೂರು ವಿಧದ ವೈರಸ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ.

 

#ಲಸಿಕಾ ಅಭಿಯಾನ:
ಪೋಷಕರು ಪಲ್ಸ್ ಪೋಲಿಯೊ ಲಸಿಕೆ ಹಾಕುವ ಅಭಿಯಾನದಲ್ಲಿ ತಮ್ಮ 5 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಮಗುವಿನ ಬಾಯಿಗೆ ಎರಡು ಹನಿ ಲಸಿಕೆ ಹಾಕಿಸಿಕೊಳ್ಳಬೇಕು.ಪೋಲಿಯೋ ಹನಿಗಳನ್ನು ಹಾಕಿದ ನಂತರ ಅದರ ಎಳೆಚಿಗುರು ಎಡ ಕಿರುಬೆರಳಿಗೆ ನೇರಳೆ ಬಣ್ಣದ ಗುರುತನ್ನು ಹಾಕಲಾಗುತ್ತದೆ. ಐದು ವರುಷದ ಒಳಗಿನ ಮಗುವಿಗೆ ಹಿಂದಿನ
ಬಾರಿ ಹಾಕಿಸಿದ್ದರೂ ಮತ್ತೆ ತಪ್ಪದೆ 5 ವರ್ಷದ ತನಕ ಪೋಲಿಯೋ ಹನಿ ಹಾಕಿಸಿ.ದೇಶವನ್ನು ಪೋಲಿಯೊ ಮುಕ್ತ ರಾಷ್ಟ್ರವಾಗಿಸುವಲ್ಲಿ ಸಹಕರಿಸಬೇಕು.

 

 

#ಭಾರತ ಪೋಲಿಯೊ ಮುಕ್ತ ದೇಶ:
ಭಾರತ ಈಗ ಪೋಲಿಯೋ ಮುಕ್ತ ದೇಶವಾಗಿದೆ.ಆದರೆ ಪೋಲಿಯೋ ಕೆಲವು ದೇಶಗಳಲ್ಲಿ ಇನ್ನೂ ಜೀವಂತವಾಗಿದೆ ಹಾಗೂ ಅದು ಮರುಕಳಿಸಬಹುದು.ನಿಮ್ಮ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಿ.ಪೋಲಿಯೋ ಹನಿಗಳನ್ನು ನೀಡುವ ಪ್ರತಿ ಅಭಿಯಾನದಲ್ಲಿ ನಿಮ್ಮ ಮಗುವಿಗೂ ನೀಡುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಭಾರತ ಪೋಲಿಯೋ ವಿರುದ್ಧ ವಿಜಯವನ್ನು ಸಾಧಿಸುತ್ತದೆ.

 

 

ಒಟ್ಟಾರೆಯಾಗಿ ಪೋಲಿಯೊ ವಿರುದ್ಧ ಹೋರಾಡಿ,ದೇಶದಿಂದ ಪೋಲಿಯೊ ನಿರ್ಮೂಲನೆಯನ್ನು ಮಾಡಲು, ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ನಾವು ಸಹಕರಿಸಬೇಕು ಅಂದಾಗ ಮಾತ್ರ ಸಂಪೂರ್ಣ ಪೋಲಿಯೊ ಮುಕ್ತ ಭವಿಷ್ಯದ ಭಾರತವನ್ನು ಕಾಣಬಹುದು.ಅಂತೆಯೇ ಒಂದು ದಿನ.ಒಂದು ಗಮನ:ಎನ್ನುವ ಉಕ್ತಿಯಂತೆ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದ ಆ ಒಂದು ದಿನವೇ ಎರಡು ಹನಿ ಲಸಿಕೆ ಹಾಕುವ ಮೂಲಕ ಪೋಲಿಯೊವನ್ನು ಕೊನೆಗೊಳಿಸಬಹುದು. ಹಾಗಾಗಿ ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ಮತ್ತು ಪೋಲಿಯೊ ತಡೆಗಟ್ಟುವ ಮೂಲಕ ಅವರಿಗೆ ಜೀವನದ ಉಡುಗೊರೆಗಳನ್ನು ನೀಡಿರಿ.

 

 

ಕೊನೆಯ ಮಾತು:
“ಜೀವದ ಎರಡು ಹನಿಗಳಿಂದ ಪೋಲಿಯೊ ವಿರುದ್ಧ ವಿಜಯ ಸಾಧಿಸುವುದನ್ನು ಮುಂದುವರಿಸೋಣ”.

 

ಲೇಖನ:
ಬಸವರಾಜ ಎಮ್ ಯರಗುಪ್ಪಿ
ಬಿ ಆರ್ ಪಿ ಶಿರಹಟ್ಟಿ
ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ. ಜಿಲ್ಲಾ ಗದಗ

Leave A Reply

Your email address will not be published.