107 ವರ್ಷಗಳ ಇತಿಹಾಸ ಹೊಂದಿದ ಗದಗನ ವಿದ್ಯಾದಾನ ಶಿಕ್ಷಣ ಸಂಸ್ಥೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿಮೆ

ವಿದ್ಯೆಯ ದಾನಕ್ಕಾಗಿ ಹೆಸರುವಾಸಿಯಾದ ವಿದ್ಯಾದಾನ ಸಮಿತಿಯು ಇಂದು ಶತಮಾನೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ವಿದ್ಯಾದಾನ ಸಮಿತಿಯ ಸ್ಥಾಪನೆಗೆ ಕಾರಣೀಕರ್ತರಾದ ನಮ್ಮ ಮನೆತನದ ಅತ್ಯಂತ ಪೂಜ್ಯ ಹಿರಿಯರಾದ ಶ್ರೀ ಸಾಬ ನಾರಾಯಣರಾಯರನ್ನು ನೆನಪಿಸಿಕೊಳ್ಳುವುದು ಅವರಿಗೆ ನುಡಿನಮನಗಳನ್ನನು ಸಲ್ಲಿಸುವುದು ವಿದ್ಯಾದಾನ ಸಮಿತಿಯ ಕಾರ್ಯದರ್ಶಿಯಾಗಿ ನನ್ನ ಆದ್ಯ ಕರ್ತವ್ಯವೆಂದೇ ಭಾವಿಸುತ್ತೇನೆ.

 

ನಾರಾಯಣರಾವ್ ವೆಂಕಟೇಶರಾವ್ ಹುಯಿಲಗೋಳರವರು 1920ರ ಆಸುಪಾಸಿನಲ್ಲಿ, ಸಾಹೇಬ ನಾರಾಯಣರಾಯರೆಂದೇ ಪ್ರಸಿದ್ದಿ ಪಡೆದಿದ್ದರು. ಅವರನ್ನು ಸಾಮಾನ್ಯ ಜನತೆ ಸಾಬ ನಾರಾಯಣರಾಯರು ಎಂದು ಕರೆಯುತ್ತಿದ್ದರು. ಏಕೆಂದರೆ, ಅವರಲ್ಲಿರುವ ವಿದ್ವತ್ತು, ಸಾಮಾಜಿಕ ಸೇವಾ ಮನೋಭಾವ ಮತ್ತು ಜಹಾಗೀರದಾರಿಕೆ ಗತ್ತುಗಮ್ಮತ್ತುಗಳನ್ನು ಗಮನಿಸಿ ಬ್ರಿಟೀಷ್ ಸರಕಾರ ಅವರನ್ನು ಅಂದಿನ ಅವರನ್ನು ಹಾನ್ರರಿ ಮ್ಯಾಜಿಸ್ಟ್ರೇಟ್ ಅಥವಾ ಗೌರವ ನ್ಯಾಯಾಧೀಶರೆಂದು ನೇಮಿಸಿತ್ತು.

 

ಹುಯಿಲಗೋಳ ಜಹಾಗೀರದಾರರ ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದ ಇವರು ಔಪಚಾರಿಕ ಉನ್ನತ ಶಿಕ್ಷಣವನ್ನು ಪಡೆಯದಿದ್ದರೂ ಮನೆಯಲ್ಲಿಯೇ ಉತ್ತಮ ಧಾರ್ಮಿಕ ಮತ್ತು ಇಂಗ್ಲೀಷ್ ಶಿಕ್ಷಣವನ್ನು ಪಡೆದರು. ಇಂಗ್ಲೀಷ್ ಭಾಷೆಯ ಮೇಲೆ ಅಪಾರ ಪ್ರಭುತ್ವವನ್ನು ಹೊಂದಿದ್ದರು. ಅಂದಿನ ಮುಂಬಯಿ ಹೈಕೋರ್ಟನ ನ್ಯಾಯಾಧೀಶರೂ ಸಹ. ಇವರು ನೀಡಿದ ಇಂಗ್ಲೀಷ್ ತೀರ್ಪುಗಳನ್ನು ಬ್ರಿಟೀಷ್‍ರೂ ಸಹ ಮುಕ್ತಕಂಠದಿಂದ ಪ್ರಶಂಸೆ ಮಾಡುತ್ತಿದ್ದರು. ಅಪ್ಪಟ ಧಾರ್ಮಿಕ ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದ ಇವರು ನಾಸ್ತಿಕರಾಗಿದ್ದರು. ಆದರೆ ಪ್ರಾಮಾಣೀಕ ಮತ್ತು ಉದಾರ ದಾನಿಗಳಾಗಿದ್ದರು.

 

1907ರಲ್ಲಿ ಸ್ಥಾಪನೆಗೊಂಡ ಯಂಗ್‍ಮೆನ್ಸ್ ಫುಟ್‍ಬಾಲ್ ಕ್ಲಬ್‍ನ ಸದಸ್ಯರಾಗಿದ್ದು. ಮುಂದೆ ನಾಡಕವಿ ಸೋದರ ಸಂಬಂಧ ಹುಯಿಲಗೋಳ ನಾರಾಯಣನರಾಯರೊಂದಿಗೆ ಸೇರಿಕೊಂಡು ಅನೇಕ ನಾಟಕಗಳ ಪ್ರದರ್ಶನಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. 1911ರ ಸರಿಸುಮಾರಿಗೆ ಎಸ್.ಕೆ.ಹುಯಿಲಗೋಳ ಮತ್ತು ಸಮಾನ ಮನಸ್ಕರು ಹುಯಿಲಗೋಳ ನಾರಾಯಣರಾಯರ ನಾಟಕಗಳ ಪ್ರದರ್ಶನದಿಂದ ಬಂದ ಸಂಗ್ರಹಿತ ಹಣವನ್ನು ಸದ್ವಿನಿಯೋಗ ಮಾಡಬೇಕೆಂಬ ಸದಿಚ್ಚೆಯನ್ನು ವ್ಯಕ್ತಪಡಿಸಿದಾಗ ಸಾಬ ನಾರಾಯಣರಾಯರು ಮುಂದೆ ಬಂದು ಅವರೆಲ್ಲರೂ ಸೇರಿ ಒಂದು ಶಾಲೆಯನ್ನು ಪ್ರಾರಂಭಿಸಿದರೆ ಅದರ ಸಂಪೂರ್ಣ ಜವಾಬ್ದಾರಿ ಮತ್ತು ಖರ್ಚನ್ನು ತಾವು ವಹಿಸಿಕೊಳ್ಳುವುದಾಗಿ ಹೇಳಿದರು, ತಮ್ಮ ಮಾತಿನಂತೆ ನಡೆದುಕೊಂಡರು. ಹೀಗೆ 1920ರಲ್ಲಿ ವಿದ್ಯಾದಾನ ಸಮಿತಿ ಎಂಬ ಇಂಗ್ಲೀಷ್ ಮಾಧ್ಯಶಾಲೆಯು ವಕೀಲ ಚಾಳದಲ್ಲಿರುವ ಒಂದು ಭಾಡಿಗೆ ಮನೆಯಲ್ಲಿ ಸುಮಾರು 8 ವಿದ್ಯಾರ್ಥಿಗಳಿಂದ ಶ್ರೀ ಜಿ.ಕೆ.ಶಿರಹಟ್ಟಿಯೆಂಬ ಒರ್ವ ಶಿಕ್ಷಕರಿಂದ ಪ್ರಾರಂಭಗೊಂಡಿತು. ಮುಂದೆಯೂ ಸಹ ವಿದ್ಯಾದಾನನ ಸಮಿತಿಯ ಬೆಳವಣಿಗೆಯಲ್ಲಿ ಸಾಬ ನಾರಾಯಣನರಾಯರು ಪ್ರಮುಖ ಪಾತ್ರ ವಹಿಸಿದರು.

 

1920ರಿಂದ ವರೆಗೆ ಧ್ರುವರಾಜ ಹುಯಿಲಗೋಳ ಬಂಧುಗಳು ತಮ್ಮ ಸ್ವಂತ ಖರ್ಚಿನಿಂದ ಶಾಲೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಖರ್ಚು ಬೆಳೆಯುತ್ತಾ ಹೋಗಿದ್ದರಿಂದ ಸಾಬ ನಾರಾಯಣರಾಯರು ತಮ್ಮ ಹೆಸರಿನಲ್ಲಿ 99 ವರ್ಷ ಖಾಯಂ ಲಾವಣಿ ಇದ್ದ ಸುಮಾರು 11 ಎಕರೆ ಜಮೀನನ್ನು ವಿದ್ಯಾದಾನ ಸಮಿತಿ ಕೊಟ್ಟು ಸ್ವತಃ ನಿಂತು ಶಾಲೆಯನ್ನು ಕಟ್ಟಿ ಪೂರ್ತಿಗೊಳಿಸಿದರು ಬಾಡಿಗೆ ಮನೆಯಲ್ಲಿದ್ದ ವಿದ್ಯಾದಾನ ಸಮಿತಿ ಶಾಲೆಯನ್ನು 1935ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿದರು.

 

ಬಹಳ ವರ್ಷಗಳವರೆಗೆ ಶ್ರೀ ಎಸ್.ವಿ.ಹುಯಿಲಗೋಳರವರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಹೀಗೆ ಸಾಬ ನಾರಾಯಣರಾಯರು ವಿದ್ಯಾದಾನ ಸಮಿತಿಯ ಸಂಸ್ಥಾಪಕರಾಗಿ ಸಂಸ್ಥೆಗೆ ಗಟ್ಟಿತಳಹದಿಯನ್ನು ಒದಗಿಸಿಕೊಟ್ಟರು. ವೈಎಂಎಫ್‍ಸಿಯವರು ಕೊಟ್ಟ ಉಪಕರಣಗಳನ್ನು ತೆಗೆದುಕೊಂಡು ಅಂದಿನ ಅನೇಕ ಸಮಾನ ಮನಸ್ಕರ ಸಹಾಯ ಸಹಕಾರದಿಂದ ಸಂಸ್ಥೆಯನ್ನು ಕಟ್ಟಿಬೆಳೆಸಿದರು.
ಹೀಗೆ ವಿದ್ಯಾದಾನ ಸಮಿತಿಯ ಸಂಸ್ಥೆಯನ್ನು ಕಟ್ಟಿ ಬೆಳೆಸುವುದರ ಜೊತೆಗೆ ಇನ್ನೂ ಅನೇಕ ಕ್ಷೇತ್ರಗಳಲ್ಲಿಯೂ ಇವರ ಸಾದನೆ ಅನನ್ಯವಾಗಿದೆ. ಗದಗ-ಬೆಟಗೇರಿ ನಗರಸಭೆಗೆ ಇವರು ಮೂರು ದಶಕಗಳಿಂತಲೂ ಹೆಚ್ಚು ಕಾಲ ಸರಕಾರಿ ನಿಯುಕ್ತ ಸದಸ್ಯರಾಗಿ ನಗರದ ಭವ್ಯ ಅಭಿವೃದ್ಧಿಗೆ ಭದ್ರಬುನಾದಿ ಹಾಕಿದರು. ನಗರಸಭೆಯ ಕ್ಲಾಥ್ ಮಾರ್ಕೇಟ್ ಕಟ್ಟಡ ಕಟ್ಟಿಸುವಲ್ಲಿ ಇವರದು ಪ್ರಮುಖ ಪಾತ್ರ ವಿ.ಡಿ.ಎಸ್.ಟಿ.ಸಿ. ಬಾಲಕರ ಪ್ರೌಢ ಶಾಲೆಯ “ಯು” ಆಕಾರದ ಕಟ್ಟಡ (ಇಂದಿನ ಬಾಲಕರ ಪ.ಪೂ.ಕಾಲೇಜು ವಿಭಾಗ) ಗಳನ್ನು ನಿರ್ಮಿಸಿದ ಶ್ರೇಯಸ್ಸು ಸಾಬ ನಾರಾಯಣರಾಯರಿಗೆ ಸಲ್ಲುತ್ತದೆ.

 

ಅಂದಿನ ಕಾಲದಲ್ಲಿಯೇ ಯಾಂತ್ರಿಕರಣದ ಕನಸನ್ನು ಕಂಡ ಇವರ ಅನೇಕ ಕಾರ್ಖಾನೆ, ಹಿಟ್ಟಿನ ಗಿರಣಿಗಳನ್ನು ಸ್ಥಾಪಿಸುವಲ್ಲಿ ಅಂದಿನ ಅನೇಕ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಏಷ್ಯಾದಲ್ಲಿಯೇ ಅತೀ ಬೃಹತ್ ಹತ್ತಿ ಮಾರಾಟ ಸಂಸ್ಥೆಯೆಂದು ಕೀರ್ತಿ ಪಡೆದಿದ್ದ ಗದಗ ಕೋ. ಆ.ಕಾಟನ್ ಸೇಲ್ ಸೊಸಾಯಿಟಿಗೆ ಸಹಕಾರಿ ಭೀಷ್ಮ ಕೆ.ಎಚ.ಪಾಟೀಲರೊಂದಿಗೆ 1917ರಲ್ಲಿ ನಾಂದಿ ಹಾಕಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಇತಿಹಾಸದ ಪುಟಗಳಲ್ಲಿ ಚಿರಂತನವಾಗಿ ಉಳಿಯುವ ಸಂಗತಿಯಾಗಿದೆ.

 

ಶಿಕ್ಷಣ ಪ್ರೇಮಿಯಾದ ಇವರು ವಿದ್ಯಾದಾನ ಸಮಿತಿ ಭೂದಾನ ಮಾಡುವುದರೊಂದಿಗೆ ಕೆ.ಎಲ್.ಇ.ಸಂಸ್ಥೆಯಿಂದ ಪ್ರಾರಂಭಗೊಂಡ ಜೆ.ಟಿ.ಕಾಲೇಜಿಗೂ ಸಹ ಅಂದಿನ ಕಾಲಕ್ಕೆ 10 ಸಾವಿರ ರೂ.ಗಳನ್ನು ದಾನ ನೀಡಿದರು. ಯಂಗ್‍ಮೇನ್ಸ್ ಫುಟಬಾಲ್ ಕ್ಲಬ್‍ನಲ್ಲಿ ಉತ್ತಮ ಆಟಗಾರ, ಅಮೇಚೂರ ನಾಟ್ಯ ಸಂಘಗಳ ಸಂಸ್ಥಾಪಕ ಸಂಚಾಲಕರಾದ ಇವರು ಸಾಹಿತ್ಯ, ಸಂಸ್ಕøತಿ, ಕ್ರೀಡಾಸಕ್ತರೂ ಆಗಿದ್ದರು.

 

ಹೀಗೆ ನ್ಯಾದಾನ, ಆಡಳಿತ, ಶಿಕ್ಷಣ, ಸಹಕಾರಿ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡದರು. ವಿದ್ಯಾದಾನ ಸಮಿತಿಯ ಸಂಸ್ಥಾಪಕರಾದ ಸಾಬ ನಾರಾಯಣನರಾಯರು ನಮ್ಮೆಲ್ಲರಿಗೂ ಪ್ರಾತಃಸ್ಮರಣೀಯರಾಗಿದ್ದಾರೆ. ಈ ರೀತಿ ಹೆಸರು ಗಳಿಸಿದ 107 ವರ್ಷಗಳ ಶಿಕ್ಷಣ ಪ್ರಸ್ತುತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಲಭಿಸಿದ್ದು ಅತ್ಯಂತ ಶ್ಲಾಘನೀಯ ಪ್ರಶಸ್ತಿ ಪಡೆದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಧಿರೇಂದ್ರ ಹುಯಿಲಗೋಳರವರಿಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಶ್ರೀ ಶಿವಚಿದಂಬರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಘ (ರಿ) ಸಂಸ್ಥೆಯ ಅಧ್ಯಕ್ಷ ಚಿದಂಬರ ಪಿ. ನಿಂಬರಗಿ, ಶ್ರೀಧರ ಕುಲಕರ್ಣಿ, ರವೀಂದ್ರ ಉಪಾಧ್ಯ, ಪ್ರಶಾಂತ ಪಾಟೀಲ, ಆರ್.ಎಸ್.ಕುಲಕರ್ಣಿ ಅವರ ಮನೆಗೆ ತೆರಳಿ ಸಂಸ್ಥೆಯ ಪರವಾಗಿ ಸನ್ಮಾಸಿದರು.

 

ಚಿತ್ರ ಲೇಖನ: ರಚಿಸು
ಚಿದಂಬರ ಪಿ. ನಿಂಬರಗಿ
ಶಿರೊಳ-ಧಾರವಾಡ

Leave A Reply

Your email address will not be published.