ತಾಯಿಯ ತ್ಯಾಗ

ತಾಯಿಯ ತ್ಯಾಗ

ಒಂದು ಊರಿನಲ್ಲಿ ಒಂದು ಬಡ ಕುಟುಂಬ ಇತ್ತು. ಆ ಕುಟುಂಬದಲ್ಲಿ ತಾಯಿ ಮತ್ತು ಒಬ್ಬ ಮಗ ಮಾತ್ರ ಇದ್ದರು. ತಾಯಿ ಅವರಿವರ ಮನೆಯಲ್ಲಿ ಕಸ ಮುಸರಿ ತಿಕ್ಕಿ, ಬಟ್ಟೆ ಒಗೆದು ಮನೆಗೆಲಸ ಮಾಡಿ ಸಾಕಿ ದೊಡ್ಡವನಾಗಿ ಮಾಡಿದಳು.

 

 

ತದ ನಂತರ ಅವನಿಗೆ ಒಂದು ಒಳ್ಳೆಯ ಸಂಬಂಧ ನೋಡಿ ಮದುವೆ ಕೂಡ ಮಾಡಿದಳು. ಮುಂದೆ  ಬಂದಂತಹ  ಸೊಸೆ ಕೂಡ ಅತ್ತೆಯನ್ನು ತುಂಬಾ ಚೆನ್ನಾಗಿ ನೋಡಿಕೊಂಡಳು. ಪರಿಸ್ಥಿತಿ ತುಂಬಾ ಹದಗೆಟ್ಟ ಮಗನು ತಾಯಿಯ ಬಳಿ ಇರುವ ಎರಡು ಎಕರೆ ಜಮೀನನ್ನ ಮಾರುವ ವಿಚಾರಕ್ಕೆ ಅವರೊಂದಿಗೆ ಜಗಳವಾಡ ತೊಡಗಿದನು.

 

 

ತಾಯಿ ಮಾರುವುದಿಲ್ಲವೆಂದು ಹಟ ಹಿಡಿದು ಕುಳಿತಳು. ಈ ವಿಷಯಕ್ಕಾಗಿ ಮಗನು ತಾಯಿಯ ಬಳಿ ಮಾತು ಬಿಟ್ಟನು ಅವಳಿಂದ ದೂರ ಹೋದನು ಕೂಡ. ಕೆಲವು ದಿನಗಳ ನಂತರ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅವಳು ಅಕಾಲಿಕ ಮರಣಕ್ಕೆ ತುತ್ತಾದಳು.

 

 

ತಾಯಿಯ ಶವ ನೋಡಲು ಬಂದ ಮಗನಿಗೆ ಆಶ್ಚರ್ಯ ಕಾಣಿಸ ತೊಡಗಿತು. ತಾಯಿ ತನ್ನ ಬಲಗೈಯಲ್ಲಿ ಒಂದು ಚೀಟಿಯನ್ನು ಬರೆದಿಟ್ಟುಕೊಂಡಿದ್ದಳು. ಆ ಚೀಟಿಯಲ್ಲಿ ಏನು ಬರೆದಿತ್ತು ಎಂದರೆ *ಮಗು ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಹಲವು ಹಣ ಒಡವೆ ಬಂಗಾರ ಎಲ್ಲವನ್ನ ಸಂಗ್ರಹಿಸಿ ಇಟ್ಟಿರುವೆನು ಅದರ ಬೀಗದ ಕೈ ನನ್ನ ದಿಂಬಿನ ಕೆಳಗಡೆ ಇದೆ ತೆಗೆದುಕೋ. ಹಾಗೆ ನನ್ನ ಎರಡು ಎಕರೆ ಜಮೀನನ್ನ ನಿನ್ನ ಮಗನ ಹೆಸರಿಗೆ ಬರೆದಿದ್ದೇನೆ.

ಈ ಚೀಟಿಯಲ್ಲಿರುವ ಅಕ್ಷರಗಳನ್ನು ಓದಿದ ಮಗನ ಪರಿಸ್ಥಿತಿ ನೀವೇ ಅರ್ಥ ಮಾಡಿಕೊಳ್ಳಿ.

 

 ಲೇಖನ : ಮುತ್ತು. ಯ. ವಡ್ಡರ
( ಶಿಕ್ಷಕರು, ಹಿರೇಮಾಗಿ )
ಬಾಗಲಕೋಟ

Leave A Reply

Your email address will not be published.