ಲೇಕ್‍ವ್ಯೂ ಆಸ್ಪತ್ರೆಯ 13ನೇ ವಾರ್ಷಿಕೋತ್ಸವ ನಿಮಿತ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ

ಅತ್ಯಾಧುನಿಕ ಸೌಲಭ್ಯಯುಳ್ಳ "ಲೇಕ್‍ವ್ಯೂ ಆಸ್ಪತ್ರೆ" ಶೀಘ್ರವೇ ಪ್ರಾರಂಭ: ಡಾ. ಗಿರೀಶ್ ಸೋನ್ವಾಲ್ಕರ್

ಬೆಳಗಾವಿ: “ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಯುಳ್ಳ ನೂತನ “ಲೇಕ್‍ವ್ಯೂ ಆಸ್ಪತ್ರೆ” ಶೀಘ್ರವೇ ಪ್ರಾರಂಭವಾಗಲಿದೆ ಎಂದು ಡಾ. ಗಿರೀಶ್ ಸೋನ್ವಾಲ್ಕರ್ ತಿಳಿಸಿದರು.

 

 

ಇಲ್ಲಿನ ಗಾಂಧಿ ನಗರದ ಖಾಸಗಿ ಹೋಟೆಲ್ ನಲ್ಲಿ ಬಿಎಚ್‍ಎಸ್(BHS) ಲೇಕ್‍ವ್ಯೂ ಆಸ್ಪತ್ರೆಯ 13ನೇ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಲಾದ ಉಚಿತ ತಪಾಸಣೆ ಶಿಬಿರ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

 

 

ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಬೆಳಗಾವಿ ಜನತೆಯ ಸಹಕಾರದಿಂದ ಲೇಕ್‍ವ್ಯೂ ಆಸ್ಪತ್ರೆಯ 13ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದೆವೆ. ನಿಮ್ಮ ಬಲದಿಂದ ಈ ಆಸ್ಪತ್ರೆಯ ಪಕ್ಕದಲ್ಲಿ ಹೊಸ ಕಟ್ಟಡ ಆರಂಭಲಾಗಿದೆ. ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಲು ಹಗಲಿರುಳು ಶ್ರಮಿಸಲಾಗುವುದು ಎಂದರು.

 

 

ಲೇಕ್‍ವ್ಯೂ ಆಸ್ಪತ್ರೆಯು ಪ್ರತಿವರ್ಷ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಸಮುದಾಯದೊಳಗೆ ಆರೋಗ್ಯ ಮತ್ತು ಯೋಗಕ್ಷೇಮದ ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ ಡಾ . ಗಿರೀಶ ಸೋನ್ವಾಲ್ಕರ್ ಅವರು ಹೇಳಿದರು.

 

 

ಈ ಸಂದರ್ಭದಲ್ಲಿ ಡಾ.ಮಹಾಂತೇಶ ತೋಡಕರ, ಡಾ.ವಿಶ್ವನಾಥ ಉಪ್ಪಲದಿನ್ನಿ ಹಾಗೂ ವೈದ್ಯರ ತಂಡ, ಲೇಕ್‍ವ್ಯೂ ಆಸ್ಪತ್ರೆಯ ಇತರರು ಇದ್ದರು.

Leave A Reply

Your email address will not be published.