” ವಾಸ್ತವ”

” ವಾಸ್ತವ”

ಕಷ್ಟವಾಗುತ್ತೆ! ಮದುವೆಯ ವಯಸ್ಸಿನಲ್ಲಿ

ರೈತರಿಗೆ ಹುಡುಗಿ ಸಿಗದೇ ಇದ್ದಾಗ,

ಬಡವರಿಗೆ ಹೆಣ್ಣು ಕೊಡದೇ ಹೋದಾಗ.

 

 

ಕಷ್ಟವಿದೆ! ಅರ್ಥ ಮಾಡಿಕೊಳ್ಳದ

ಮಡದಿ ಮತ್ತು ಮಾತೆಯನು

ಒಂದೇ ಮನೆಯಲಿ ಕಾಳಗವಾಗದಂತೆ

ನೋಡಿಕೊಂಡು ಸಂಸಾರ ಸಾಗಿಸಲು.

 

 

ಕಷ್ಟವಾಗುತ್ತೆ! ಒಬ್ಬನೇ  ಗಂಡು ಮಗು ಇದ್ದಾಗ,

ಅವನ ಜೊತೆಗೆ ಇನ್ನೊಬ್ಬ ಇದ್ದರೆ

ಜೋಡಾಗುತ್ತಿದ್ದರೆಂದು ಅನಿಸಿದಾಗ.

 

 

ಕಷ್ಟವಾಗುತ್ತೆ! ಒಬ್ಬಳೇ ಹೆಣ್ಣು ಮಗಳಿದ್ದಾಗ,

ಕಷ್ಟ ಸುಖ ಹಂಚಿಕೊಳ್ಳೋಕೆ ಅವಳಿಗೆ

ಇನ್ನೊಬ್ಬಳು ಸಹೋದರಿ ಇರಬೇಕಿತೆಂದು ತಿಳಿದಾಗ”

 

 

ಕಷ್ಟವಿದೆ! ಸಹನೆ ಇಲ್ಲದ,

ಬಹುಜನವಿದ್ದ ಹೆಣ್ಣುಮಕ್ಕಳನ್ನು

ಒಂದೇ ತರಾ ನೋಡಿಕೊಳ್ಳಲು

ಮನಸ್ಸು ಅರ್ಥ ಮಾಡಿಕೊಳ್ಳಲು.

 

 

ಕಷ್ಟವಿದೆ! ಅಧಿಕ ಗಂಡುಮಕ್ಕಳಿರುವ

ಮನೆಯ  ಆಸ್ತಿಯ ಪಾಲಿನಲಿ,

ಕೊಂಚವೂ ಅಂತರವಿಲ್ಲದಂತೆ

ಹಂಚಿಕೊಡಲು.

 

 

ಸಲಾಂ ಹೊಡೆಯಬೇಕಾಗುತ್ತೆ!

ಎಷ್ಟೇ ನೋವಿದ್ದರೂ

ಕಷ್ಟವನ್ನು ನಿಭಾಯಿಸಿಕೊಂಡು

ಹೋಗುವ ಗಂಡಸರಿಗೆ,

ಇವರಿಗೆ ತಾಳ್ಮೆ ಎಂಬ

ವರ ಕೊಟ್ಟ ದೇವರಿಗೆ.

 

ರಚನೆ :✍️.ಮಹಾಂತೇಶ ಕಮತ
ಹಿರೇಹೊದ್ಲುರ, ತಾ/ಜಿ :ಬಾಗಲಕೋಟ

Leave A Reply

Your email address will not be published.