ವಿದ್ಯಾರ್ಥಿ ಜೀವನದಲ್ಲಿ ಪಾಲಕರ ಪಾತ್ರ ಮಹತ್ವದ್ದು- ಟಿ ಕರಿಬಸವರಾಜು

ಮೂಡಲಗಿ : ವಿದ್ಯಾರ್ಥಿ ಜೀವನದಲ್ಲಿ ಪಾಲಕರ ಪಾತ್ರ ಮಹತ್ವದ್ದು ಪಾಲಕರು ವಿದ್ಯಾರ್ಥಿಗಳು ಮಾನಸಿಕ ಭಾವನೆಗಳನ್ನು ಅರ್ಥೈಸಿಕೊಂಡು ಪದವಿ ಪೂರ್ವ ಹಂತದ ಶಿಕ್ಷಣ ಮಕ್ಕಳ ಬದುಕನ್ನು ನಿರ್ಮಿಸುವ ಮಹತ್ವದ ಹೆಜ್ಜೆಯಾಗಿದೆ.

 

 

ಈ ಹಂತದಲ್ಲಿ ಮಕ್ಕಳು ಕಲಿಕೆಯಲ್ಲಿ ತೊಡಗಿರುವ ಬಗ್ಗೆ ಪಾಲಕರು ಹೆಚ್ಚಿನ ಗಮನಹರಿಸುವುದು ಅಗತ್ಯವಿದೆ ಎಂದು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಓ ಟಿ. ಕರಿಬಸವರಾಜು ಹೇಳಿದರು.

 

 

ಮಂಗಳವಾರ ಸ್ಥಳೀಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

 

 

ಉಪನ್ಯಾಸಕ ಎಸ್. ಡಿ. ವಾಲಿ ಮಾತನಾಡಿ, ಶಿಕ್ಷಣ ಇಲಾಖೆ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಸಾಕಷ್ಟು ಹೊಸ ನಿಯಮಗಳನ್ನು ಪರೀಕ್ಷಾ ಪದ್ದತಿಗಳನ್ನು ಜಾರಿಗೆ ತಂದಿದೆ ಅದರಂತೆ ನಾವುಗಳು ಶಿಕ್ಷಣದ ಚಟುವಟಿಕೆಗಳನ್ನು ರೂಪಿಸುತ್ತಿದ್ದೇವೆ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳುವಲ್ಲಿ ಪಾಲಕರು ಅವಕಾಶಗಳನ್ನು ಒದಗಿಸಿಕೊಡಬೇಕೆಂದರು.

 

 

ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಬಿ. ಗೋಟೂರೆ ಮಾತನಾಡಿ, ಪಿಯು ಹಂತದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಜಗತ್ತಿನಲ್ಲಿ ಸಾಕಷ್ಟು ಅವಕಾಶಗಳು ಇವೆ ನಮ್ಮ ಮಕ್ಕಳು ಹೆಚ್ಚು ಅಂಕಗಳನ್ನು ಗಳಿಸಲು ಮತ್ತು ಪಠ್ಯ ವಿಷಯದ ಜೊತೆಗೆ ಪಠೇತರ ವಿಷಯದಲ್ಲಿ ತೊಡಗುವಂತೆ ಪಾಲಕರು ಪ್ರಯತ್ನಿಸಬೇಕೆಂದರು.

 

 

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ತ. ಪಾರ್ಶಿ ವಹಿಸಿಕೊಂಡು ಮಾತನಾಡಿ ಸಂಸ್ಥೆಯು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಸಾಕಷ್ಟು ಅವಕಾಶಗಳನ್ನು ಮಾಡಿಕೊಡುತ್ತದೆ .

 

 

ವಿದ್ಯಾರ್ಥಿಗಳ ಜೊತೆಗೆ ಉಪನ್ಯಾಸಕರು ಸಾಕಷ್ಟು ಫಲಿತಾಂಶ ಸುದಾರಣೆಗೆ ಆಧ್ಯತೆ ನೀಡುತ್ತಿದ್ದಾರೆ ಎಲ್ಲ ಪಾಲಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅವಕಾಶ ನೀಡಬೇಕೆಂದರು.

 

 

ಕಾರ್ಯಕ್ರಮದಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳ ಪಾಲಕರು ಭಾಗವಹಿಸಿದ್ದರು ಕೆಲವು ಪಾಲಕರು ಮಕ್ಕಳ ಅಧ್ಯಯನದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಉಪನ್ಯಾಸಕ ಎಸ್.ಬಿ.ಲಟ್ಟಿ ಸ್ವಾಗತಿಸಿದರು ಉಪನ್ಯಾಸಕರ ಎಂ. ಬಿ. ಸಿದ್ನಾಳ ನಿರೂಪಿಸಿದರು ಉಪನ್ಯಾಸಕ ಎಸ್.ಎನ್.ಕುಂಬಾರ ವಂದಿಸಿದರು.

Leave A Reply

Your email address will not be published.