ಯರಗಟ್ಟಿ ಪಟ್ಟಣದ ಅಂಬೇಡ್ಕರ ಭವನದಲ್ಲಿ ಕರ್ನಾಟಕ ದಲೀತ ಸಂಘರ್ಷ ಸಮೀತಿಯ ಭೀಮವಾದ ಜಿಲ್ಲಾ ಸಮೀತಿಯವರು ಯರಗಟ್ಟಿ ಹಾಗೂ ಸವದತ್ತಿ ತಾಲೂಕಾ ಸಮಿತಿ ರಚನೆಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಯರಗಟ್ಟಿ: ಪಟ್ಟಣದ ಅಂಬೇಡ್ಕರ ಭವನದಲ್ಲಿ  ರವಿವಾರ ದಿ.3 ರಂದು ಕರ್ನಾಟಕ ದಲೀತ ಸಂಘರ್ಷ ಸಮೀತಿಯ ಭೀಮವಾದ ಜಿಲ್ಲಾ ಸಮೀತಿಯವರು ಯರಗಟ್ಟಿ ಹಾಗೂ ಸವದತ್ತಿ ತಾಲೂಕಾ ಸಮಿತಿ ರಚನೆಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.

 

 

ಡಿ.ಎಸ್.ಎಸ್. ಜಿಲ್ಲಾ ನೌಕರರ ಸಂಘದ ಅದ್ಯಕ್ಷ ಬಸವರಾಜ ರಾಯಗೊಳ ಜ್ಯೋತಿ ಬೆಳಗಿಸುವದರೊಂದಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

 

 

ಪ್ರಸ್ತಾವಿಕವಾಗಿ ಗೋಪಾಲ ದಳವಾಯಿ ಮಾತನಾಡಿ ಸಮಾಜಕ್ಕೆ ಅನ್ಯಾಯವಾದಾಗ ಸಂಘಟನೆಗಳು ಅವಶ್ಯವಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ ಸಂವಿಧಾನ ತಿದ್ದುವವರ ವಿರುಧ ಪ್ರತಿಭಟನೆ ಅಗತ್ಯ ಪ್ರತಿಯೊಬ್ಬರು ಡಾ. ಬಿ. ಆರ್. ಅಂಬೇಡ್ಕರ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಅವರ ಅಂದಿನ ಹೋರಾಟದ ಫಲವೇ ಇಂದು ನಮಗೆ ದಾರಿ ದೀಪವಾಗಿದೆ ಎಂದರು.

 

 

ಬಸವರಾಜ ಕಟ್ಟಿಮನಿ ಸಂಘಟನೆ ಸಮಾಜ ಸುಧಾರನೆಗೆ ಮೀಸಲಾಗಿರಬೇಕೆ ಹೊರತು ಸ್ವಂತಕ್ಕೆ ಅಲ್ಲ ಎಂದರು.ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು ಯರಗಟ್ಟಿ ಹಾಗೂ ಸವದತ್ತಿ ತಾಲೂಕಾ ಪದಾಧಿಕಾರಿಗಳ ಆಯ್ಕೆ
ಮಾಡಿದರು.

 

 

ಅದ್ಯಕ್ಷರಾಗಿ ಸುರೇಶ ಭಜಂತ್ರಿ, ಸಂಚಾಲಕರಾಗಿ ಸುನೀಲ ಚೆನ್ನಮೇತ್ರಿ, ಶ್ರೀಕಾಂತ ಚೆನ್ನಮೇತ್ರಿ, ರಜಾಕ ದಿಲಾವರನಾಯ್ಕ, ಖಜಾಂಚಿಯಾಗಿ ನಾಗರಾಜ ನಡಮನಿ, ಸದಸ್ಯರಾಗಿ ನಜೀರ ನದಾಫ, ಶಾನೂರ ಕಮತಗಿ, ದಿಲಾವಾರ ದೊಡಮನಿ, ಸಾಗರ ಚೆನ್ನಮೇತ್ರಿ, ಫಕ್ರು ಸನದಿ, ಪ್ರದೀಪ ಮಾಳಗಿ, ಮಲ್ಲಿಕಾರ್ಜುನ ಮಾಳಗಿ ಅಂತಾ ಘೋಷಣೆಮಾಡಿ ಪ್ರಮಾನ ವಚನ ಭೋದಿಸಿದರು.

 

 

ಈ ವೇಳೆ ಬೆಳಗಾವಿ ಜಿಲ್ಲಾ ಅಧ್ಯಕ್ಷ ಸಿದ್ರಾಮ ಮೇಟಿ, ಕಾರ್ಯದರ್ಶಿ ಶಂಕರ ಕಾಂಬಳೆ, ಜಿಲ್ಲಾ ಖಜಾಂಚಿ ಸಂತೋಷ ಕಾಂಬಳೆ, ವಿನಾಯಕ ಕೋಲಕಾರ, ಉದ್ಯಮಿ ಬಿಶ್ವನಾಥ, ಪ್ರಕಾಶ ವಾಲಿ, ಮಾದೇವ ಮುರಗೋಡ, ವಿಲ್ಲಸನ್ ಸೊಪ್ಪಡ್ಲ, ಡಿ.ಕೆ.ರಫಿಕ, ಅಬಿದಬೇಗ ಜಮಾದಾರ ಸೇರಿದಂತೆ ಮುಂತಾದವರು ಇದ್ದರು.

Leave A Reply

Your email address will not be published.