ವಿಜಯಪುರ ವಿಮಾನ ನಿಲ್ದಾಣ ಪೆಬ್ರವರಿ ಅಂತ್ಯಕ್ಕೆ ಹಾರಾಟಕ್ಕೆ ಸಿದ್ದ : ಸಚಿವ ಶರಣ ಬಸಪ್ಪ ದರ್ಶನಾಪುರ

ಬೆಳಗಾವಿ ಸುವರ್ಣ ಸೌಧ : ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಪೆಬ್ರವರಿ ಅಂತ್ಯದಲ್ಲಿ ಮುಕ್ತಾಯಗೊಳಿಸಿ, ವಿಮಾನ ಹಾರಾಟವನ್ನು ಆರಂಭಿಸಲಾಗುವುದು ಎಂದು ಸಚಿವ ಶರಣ ಬಸಪ್ಪ ದರ್ಶನಾಪುರ ಹೇಳಿದರು.

 

 

ಅವರು ಇಂದು ವಿಧಾನ ಪರಿಷತ್ ನಲ್ಲಿ ಸದಸ್ಯ ಪ್ರಕಾಶ್ ಕೆ ರಾಥೋಡ್ ಕೇಳಿದ ಚುಕ್ಕೆಗುರಿತನ ಪ್ರಶ್ನೆ 134 ಕ್ಕೆ , ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃಧ್ದಿ ಸಚಿವರ ಪರವಾಗಿ ಉತ್ತರಿಸಿದರು.

 

 

ವಿಜಯಪುರದಲ್ಲಿ ವಿಮಾನ ನಿಲ್ದಾಣವನ್ನು ಏರ್ ಬಸ್-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ 347.92 ಕೋಟೊ ರೂ ಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಲಗುತ್ತಿದ್ದು, ಈ ಕಾಮಗಾರಿಗೆ ಇದುವರೆಗೆ 347.92 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ.

 

 

3 ಪ್ಯಾಕೇಕ್ ಗಳಲ್ಲಿ ನಿರ್ಮಾಣವಾಗುತ್ತಿರುವ ಈ ವಿಮಾನ ನಿಲ್ದಾಣದ ಎಲ್ಲಾ ಕಾಮಗಾರಿಗಳು ಪೆಬ್ರವರಿ 2024 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.

 

 

ಈ ವಿಮಾನ ನಿಲ್ದಾಣಕ್ಕಾಗಿ 727.01 ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಕೊಳ್ಳಲಾಗಿದ್ದು, ಇದುವರೆಗೆ 351 ಎಕರೆ ಜಮೀನಿಗೆ 31.92 ಕೋಟಿ ರೂ ಗಳ ಪರಿಹಾರವನ್ನು ಪಾವತಿಸಲಾಗಿದ್ದು, 28.08 ಎಕರೆ ಜಮೀನಿಗೆ ನ್ಯಾಯಾಲಯದಲ್ಲಿ 2.25 ಕೋಟಿ ರೂ ಗಳನ್ನು ಠೇವಣಿ ಮಾಡಲಾಗಿದೆ ಎಂದರು.

Leave A Reply

Your email address will not be published.